ವಾಕ್ಯ ಸಮುದಾಯ 3
ಅಜಿತ್ ನ ಹುಟ್ಟುಹಬ್ಬವಾಗಿತ್ತು. ಆತನ ಎಲ್ಲಾ ಸ್ನೇಹಿತರು ಮತ್ತು ಸಂಬಂಧಿಕರು ಸೇರಿದ್ದರು. ಅವನು ಅನೇಕ ಉಡುಗೊರೆಗಳನ್ನು ಸ್ವೀಕರಿಸಿದನು. ಅದರಲ್ಲಿ ಪುಸ್ತಕಗಳು, ಆಟದ ಸಾಮಾನುಗಳು ಮತ್ತು ಬಟ್ಟೆಗಳಿದ್ದವು. ಅಜಿತ್ ನ ಚಿಕ್ಕಮ್ಮ ಆತನಿಗೆ ಅನಿರೀಕ್ಷಿತ ಉಡುಗೊರೆಯಾಗಿ ಒಂದು ಗುಲಾಬಿ ಗಿಡವನ್ನು ನೀಡಿದರು. ಅಜಿತನಿಗೆ ಆತನ ಚಿಕ್ಕಮ್ಮನ ಉಡುಗೊರೆ ಅತ್ಯುತ್ತಮವಾಗಿ ಇಷ್ಟವಾಯಿತು ಮತ್ತು ಒಂದೇ ಬಾರಿಗೆ ತೋಟಕ್ಕೆ ಓಡಿ ಹೋದನು ಮತ್ತು ಗಿಡವನ್ನು ನೆಟ್ಟನು. ಅಜಿತ್ ಪ್ರತಿದಿನ ಗಿಡಕ್ಕೆ ನೀರು ಹಾಕುತ್ತಿದ್ದನು. ಬೆಳಗ್ಗೆ ಎದ್ದ ತಕ್ಷಣವೇ ಆತ ಗಿಡ ಎಷ್ಟು ಬೆಳೆದಿದೆ ಎಂದು ನೋಡಲು ಹೋಗುತ್ತಿದ್ದನು. ಒಂದು ದಿನ ಎರಡು ಪುಟ್ಟ ಗುಲಾಬಿ ಮೊಗ್ಗುಗಳು ಹೊರಬರುವುದನ್ನು ನೋಡಿದನು. ಅವನು ನೋಡುತ್ತಿದ್ದಂತೆಯೇ ಮೊಗ್ಗುಗಳು ಸುಂದರವಾದ ಹಳದಿ ಬಣ್ಣದ ಗುಲಾಬಿ ಹೂಗಳಾಗಿ ಅರಳಿದವು. ಆತ ಸಂತೋಷದಿಂದ ರೋಮಾಂಚನಗೊಂಡನು. ಆತನ ಸಹಾಯ ತಾಯಿಯ ಸಹಾಯದಿಂದ ಅವನು ಹೂಗಳನ್ನು ಕಿತ್ತನು. ಅವನು ಮೊದಲ ಎರಡು ಗುಲಾಬಿಗಳನ್ನು ತನ್ನ ತಾಯಿ ಮತ್ತು ತಂಗಿಗೆ ನೀಡಿದನು. ಅಜಿತ್ ತನ್ನ ತೋಟದಲ್ಲಿ ಇನ್ನು ಹೆಚ್ಚಿನ ಗಿಡಗಳನ್ನು ನೆಡಲು ನಿರ್ಧರಿಸಿದನು.
71. ಅಜಿತ್ ನ ಹುಟ್ಟುಹಬ್ಬದ ಅತ್ಯುತ್ತಮ ಉಡುಗೊರೆ
- ಓಟದ ಕಾರು
- ಅಂಗಿ
- ಗುಲಾಬಿ ಗಿಡ
- ಪುಸ್ತಕ
72. ಅಜಿತ್ ಎದ್ದ ತಕ್ಷಣವೇ ಅವನು
- ಓದಲು ಆರಂಭಿಸುತ್ತಿದ್ದನು
- ಗಿಡ ನೋಡಲು ಹೋಗುತ್ತಿದ್ದನು
- ಸ್ನಾನ ಮಾಡುತ್ತಿದ್ದನು
- ಶಾಲೆಗೆ ಹೋಗುತ್ತಿದ್ದನು
73. ಮೊದಲು ಎಷ್ಟು ಗುಲಾಬಿ ಮೊಗ್ಗುಗಳು ಕಾಣಿಸಿಕೊಂಡವು
- ಒಂದು
- ನಾಲ್ಕು
- ಎರಡು
- ಹಲವು
74. ಮೊದಲ ಎರಡು ಗುಲಾಬಿಗಳನ್ನು ಅಜಿತ್ ಇವರಿಗೆ ಉಡುಗೊರೆಯಾಗಿ ಕೊಟ್ಟನು
- ಅವನ ಸ್ನೇಹಿತರು
- ಅವನ ಚಿಕ್ಕಮ್ಮ
- ಅವನ ತಾಯಿ ಮತ್ತು ತಂಗಿ
- ಅವನ ತಾಯಿ ಮತ್ತು ಚಿಕ್ಕಮ್ಮ
75. ರೋಮಾಂಚನ ಪದ ಅರ್ಥ
- ದುಃಖ
- ಭಾವೋದ್ರೇಕ
- ಭಯ
- ಆಶ್ಚರ್ಯ
ಉತ್ತರ ಮತ್ತು ವಿವರಣೆ
71 – C
72 – B
73 – C
74 – C
75 -B