ವಾಕ್ಯ ಸಮುದಾಯ 2
ತನ್ನ ಕೋಣೆಯ ಛಾವಣಿಯ ಮೇಲೆ ಅಂಟಿಸಿರುವ ನಕ್ಷತ್ರಗಳನ್ನು ವೀಕ್ಷಿಸುತ್ತಾ ಹೇಮಾ ತನ್ನ ಹಾಸಿಗೆಯ ಮೇಲೆ ಮಲಗಿದ್ದಳು. ಯಾವೊಂದೂ ಬಟ್ಟೆಗಳೂ ತನಗೆ ಸರಿಹೊಂದುತ್ತಿಲ್ಲವೆಂದು ಅವಳು ಅಸಮಾಧಾನಗೊಂಡಿದ್ದಳು. ಅವಳು ಮತ್ತೆ ಒಂದೊಂದಾಗಿ ಎಲ್ಲಾ ಬಟ್ಟೆಗಳನ್ನು ಧರಿಸಿ ನೋಡಿದಳು ಅವು ತುಂಬಾ ಬಿಗಿಯಾಗಿಯೂ ಇಲ್ಲ ತುಂಬಾ ಚಿಕ್ಕದಾಗಿಯೂ ಇದ್ದವು. ಬೀರು ತುಂಬಾ ಬಟ್ಟೆಗಳಿದ್ದರು ಅವುಗಳಲ್ಲಿ ಯಾವುದನ್ನು ಧರಿಸಲು ಸಾಧ್ಯವಾಗಲಿಲ್ಲ. ಅವಳಿಗೆ ಒಂದು ಅದ್ಭುತವಾದ ಆಲೋಚನೆ ಹೊಳೆಯಿತು. ಅವಳ ಕಣ್ಣುಗಳಲ್ಲಿ ಕಾಂತಿ ತುಂಬಿ ತನ್ನ ತಾಯಿಯ ಕೋಣೆಗೆ ಓಡಿದಳು. “ಅಮ್ಮ ನನಗೆ ಹೊಸ ಬಟ್ಟೆ ಬೇಕು” ಎಂದು ತಾಯಿಯನ್ನು ಕೇಳಿದಳು ಮತ್ತು ತನ್ನ ತಾಯಿಗೆ “ನಾನು ನನ್ನ ಎಲ್ಲಾ ಬಟ್ಟೆಗಳನ್ನು ದಾನದ ರೂಪದಲ್ಲಿ ಕೊಟ್ಟ ನಂತರವೇ ನಿಮ್ಮಿಂದ ಬಟ್ಟೆಗಳನ್ನುಪಡೆಯುವೆ ಎಂದು ಹೇಳಿದಳು.” ಇನ್ನು ಮುಂದೆ ಬಟ್ಟೆಗಳನ್ನು ಒಟ್ಟುಗೂಡಿಸುವುದಿಲ್ಲ. ಅವಳ ತಾಯಿಯು ನಸುನಕ್ಕು ಮಗಳನ್ನು ತಬ್ಬಿಕೊಂಡಳು. ಅವಳಿಗೆ ಸಹೃದಯಿಯಾದ ಮಗಳು ದೊರಕಿದ್ದಳು.
66.’ಹೇಮಾ ತನ್ನ ಹಾಸಿಗೆಯ ಮೇಲೆ ಮಲಗಿದ್ದಳು ಏಕೆಂದರೆ
- ಅವಳು ಸುಸ್ತಾಗಿದ್ದಳು
- ನಕ್ಷತ್ರಗಳನ್ನು ನೋಡಲು ಇಷ್ಟಪಡುತ್ತಿದ್ದಳು
- ಏನನ್ನು ಧರಿಸಬೇಕೆಂದು ಯೋಚಿಸುತ್ತಿದ್ದಳು
- ಸೋಂಬೇರಿಯಾದ ಹುಡುಗಿ
67.ಅವಳು ತನ್ನ ಯಾವ ಬಟ್ಟೆಗಳನ್ನು ಹಾಕಿಕೊಳ್ಳಲು ಆಗುತ್ತಿರಲಿಲ್ಲ ಏಕೆಂದರೆ
- ಅವು ಫ್ಯಾಶನ್ಗೆ ಹೊಂದುವ ರೀತಿ ಇರಲಿಲ್ಲ
- ಅವು ತುಂಬಾ ಬಣ್ಣ ಬಣ್ಣವಾಗಿದ್ದವು
- ಅವಳಿಗೆ ಯಾವುದು ಆಯ್ಕೆ ಮಾಡಬೇಕು ಎಂದು ತಿಳಿಯಲಿಲ್ಲ
- ಯಾವ ಬಟ್ಟೆಯೂ ಅವಳಿಗೆ ಹೊಂದಿಕೆಯಾಗಲಿಲ್ಲ
68. ‘ಒಟ್ಟುಗೂಡಿಸುವ’ ಪದದ ಸಮಾನಾರ್ಥಕ ಪದ
- ಶೇಖರಿಸು
- ವಿತರಿಸು
- ಹಂಚು
- ದಾನ ಮಾಡು
69. ಹೇಮಾ:
- ದುರಾಸೆಯ ಹುಡುಗಿ
- ದಾನಮಾಡುವ ಹುಡುಗಿ
- ಸ್ವಾರ್ಥಿ
- ಜಿಪುಣಿ
70. ‘ದಾನ ಮಾಡು’ ಎಂಬ ಪದದ ವಿರುದ್ಧಾರ್ಥಕ ಪದ
- ಕೊಡು
- ಪಡೆ
- ವಿತರಿಸು
- ವೆಚ್ಚ ಮಾಡು
ಉತ್ತರ ಮತ್ತು ವಿವರಣೆ
66 – C
67 – D
68 – A
69 – B
70 – B