ವಾಕ್ಯ ಸಮುದಾಯ 4
ಬೇವಿನ ಮರವನ್ನು ಅದರ ಬೀಜ ತೊಗಟೆ ಮತ್ತು ಎಲೆಗಳ ಔಷದೀಯ ಲಾಭಗಳಿಂದ ‘ಹಳ್ಳಿಯ ಔಷಧಾಲಯ’ ಎಂದು ಕರೆಯಲ್ಪಡುತ್ತದೆ. ಇದನ್ನು ಸಂಸ್ಕೃತದಲ್ಲಿ ‘ಅರಿಷ್ಟ’ ಎಂದು ಕರೆಯಲಾಗುತ್ತದೆ. ಹಾಗೆಂದರೆ ಪರಿಪೂರ್ಣ,ನಾಶವಾಗದ ಮತ್ತು ಪೂರ್ಣ ಎಂದರ್ಥ. ಬೇವಿನ ಎಣ್ಣೆಯು ಕೀಟ ನಿಯಂತ್ರಣದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಮತ್ತು ಸೊಳ್ಳೆ ನಿಯಂತ್ರಕಗಳ ಬದಲಿಗೆ ಕೂಡ ಬಳಸಬಹುದು. ಬೇವಿನ ಮರದ ಬಿಜೆಪಿ ತಯಾರಿಸಿದ ಕೇಕ್ ಗಳನ್ನು ಗೊಬ್ಬರವಾಗಿ ಬಳಸಲಾಗುತ್ತದೆ. ಬೇವಿನ ಮರದ ಎಲೆಯ ಜಲ ಪಿಷ್ಟವನ್ನು (paste) ಸಿಡುಬು (chickenpox) ರೋಗವನ್ನು ಗುಣಪಡಿಸಲು ಬಳಸಲಾಗುತ್ತದೆ.ಬೇವಿನ ಕಡ್ಡಿಗಳನ್ನು ದಾತುನ (datum) ಎಂದು ಕರೆಯಲಾಗುತ್ತದೆ. ಇವನ್ನು ಹಳ್ಳಿಗಳಲ್ಲಿ ಹಲ್ಲನ್ನು ಉಜ್ಜಲು ಬಳಸುತ್ತಾರೆ. ಬೇವಿನ ತೊಗಟೆ ಮತ್ತು ಬೇರುಗಳ ಪುಡಿಯನ್ನು ಪ್ರಾಣಿಗಳ ಮೇಲೆ ಹತ್ತುವ ಹುಳ ಮತ್ತು ಉಣ್ಣೆಗಳನ್ನು ನಿಯಂತ್ರಿಸಲು ಕೂಡ ಬಳಸುತ್ತಾರೆ.
76. ಔಷಧಾಲಯ:
-
- ಕೃಷಿ ಭೂಮಿ
- ಔಷಧಿಗಳ ಅಂಗಡಿ
- ಆಟದ ಮೈದಾನ
- ತೋಟದ ಮನೆ
77. ರೈತರಿಗೆ ಉಪಯೋಗಕಾರಿಯಾದ ಬೇವಿನ ಮರದ ಭಾಗ
-
- ಬೀಜಗಳು
- ತೊಗಟೆ
- ಬೇವಿನ ಕಡ್ಡಿ
- ಎಲೆಗಳು
78. ಪರಿಪೂರ್ಣ ಈ ಪದಕ್ಕೆ ಕೆಳಗಿನವುಗಳಲ್ಲಿ ಯಾವುದು ಸಮಾನ ಅರ್ಥ ಕೊಡುವ ಪದವಲ್ಲ
-
- ದೋಷರಹಿತ
- ಲೋಪ ಇಲ್ಲದಿರುವಿಕೆ
- ತಡೆರಹಿತ
- ಕೊರತೆ
79. ಸಮುದಾಯದಲ್ಲಿ ವಾಕ್ಯ ಕೀಟ ಪದದ ಅರ್ಥ
-
- ಬೆಳೆ ಹಾಳುಮಾಡುವ ಕ್ರಿಮಿ
- ಕೋಪಗೊಂಡ ಒಬ್ಬ ಮನುಷ್ಯ
- ಕಲುಷಿತ ನೀರು
- ಮಾಲಿನ್ಯ
80.ಬೇವಿನ ______ಗಳನ್ನು ಹಳ್ಳಿಗಳಲ್ಲಿ ಹಲ್ಲನ್ನು ಉಜ್ಜಲು ಬಳಸುತ್ತಾರೆ.
-
- ಬೇರು
- ಎಲೆ
- ಕಡ್ಡಿ
- ಬೀಜದ ಕೇಕ್
ಉತ್ತರ ಮತ್ತು ವಿವರಣೆ
76 – B
77 – A
78 – D
79 – A
80 – C