ವಾಕ್ಯ ಸಮುದಾಯ 4
ಸಂತೆಯ ದಿನವನ್ನು ಗ್ರಾಮದಲ್ಲಿ ಮಕ್ಕಳು, ಮಹಿಳೆಯರು ಮತ್ತು ಪುರುಷರು ಆನಂದಿಸುತ್ತಿದ್ದರು. ರೈತರಿಗೆ ಅವರ ತರಕಾರಿ ಮತ್ತು ಧಾನ್ಯಗಳನ್ನು ಹಾಗೂ ಗದ್ದೆಗಳಲ್ಲಿ ಬಳಸಿದ ಇತರ ವಸ್ತುಗಳನ್ನೆಲ್ಲ ಮಾರುವುದಕ್ಕೆ ಉತ್ತಮ ಜಾಗವಾಗಿತ್ತು.
ಬೆಳಿಗ್ಗೆ ಬೇಗನೆ ರೈತರು ತಮ್ಮಗಾಡಿಗಳಿಗೆ ಮತ್ತು ಟ್ರ್ಯಾಕ್ಟರ್ ಗಳಿಗೆ ಗೋಣಿ ತುಂಬಾ ಧಾನ್ಯಗಳನ್ನು ಮತ್ತು ಬುಟ್ಟಿ ತುಂಬಾ ಹಣ್ಣುಗಳನ್ನು ಮತ್ತು ತರಕಾರಿಗಳನ್ನು ಏರಿಸುತ್ತಿದ್ದರು. ಅವರು ಸಂತೆಯಲ್ಲಿ ಮಾರಲು ಕುರಿ ಮತ್ತು ಆಡುಗಳನ್ನು, ದನಗಳನ್ನು ಮತ್ತು ಎಮ್ಮೆಗಳನ್ನು ಹಾಗೂ ಕೋಳಿಗಳು ಒಯ್ಯುತ್ತಿದ್ದರು. ಅವರು ಸಂತೆಯಲ್ಲಿ ವಸ್ತುಗಳನ್ನು ಕೊಳ್ಳುವ ಅಗತ್ಯವೂ ಇತ್ತು. ಅವರಿಗೆ ಬಟ್ಟೆಗಳು ಮತ್ತು ಸಾಂಬಾರ ವಸ್ತುಗಳು ಮತ್ತು ಮನೆಬಳಕೆಯ ವಸ್ತುಗಳು ಬೇಕಾಗುತ್ತಿತ್ತು. ಈ ವಸ್ತುಗಳು ಅವರ ತೋಟದ ಹತ್ತಿರ ಸುಲಭವಾಗಿ ಸಿಗುತ್ತಿರಲಿಲ್ಲ.
ಹೆಂಗಸರು ಬಣ್ಣದ ಗಾಜಿನ ಬಳೆಗಳನ್ನು ಬಳೆ ಮಾರಾಟಗಾರರಿಂದ ಕೊಳ್ಳುತ್ತಿದ್ದರು. ಬೆಂಕಿಯನ್ನು ಹೊತ್ತಿಸಲಾಗುತ್ತಿತ್ತು. ಪಕೋಡ ಪೂರಿ ಪಲ್ಯಗಳನ್ನು ಮಾಡಲಾಗುತ್ತಿತ್ತು ಸಮೋಸ ಮತ್ತು ಕಬ್ಬಿನ ರಸಗಳು ಜನಪ್ರಿಯವಾಗಿದ್ದವು. ಮಕ್ಕಳು ತಮ್ಮ ಗೆಳೆಯರೊಂದಿಗೆ ಸಂತೋಷದಿಂದ ಸುತ್ತಾಡುತ್ತಿದ್ದರು. ಅವರು ಜೋಕಾಲಿ ಮತ್ತು ಸಂತೋಷದ ಸುತ್ತುವಿಕೆ ಸವಾರಿ ಮಾಡುತ್ತಿದ್ದರು. ಎಲ್ಲರೂ ಸಂತೆಯ ದಿನವನ್ನು ಇಷ್ಟಪಡುತ್ತಿದ್ದರು.
91. ಕೆಳಗಿನವುಗಳಲ್ಲಿ ಯಾವುದು ಗೋಣಿಗೆ ಸಮಾನಾರ್ಥಕ ಪದ
-
- ಪೆಟ್ಟಿಗೆಗಳು
- ಚೀಲಗಳು
- ರಟ್ಟಿನ ಪೆಟ್ಟಿಗೆಗಳು
- ಪೊಟ್ಟಣಗಳು
92.ಮಕ್ಕಳು ಸಂತೆಯಲ್ಲಿ ಏನು ಮಾಡುತ್ತಿದ್ದರು?
-
- ತರಕಾರಿ ಮತ್ತು ಧಾನ್ಯಗಳನ್ನು ಮಾರುವುದು
- ಆಡುಗಳನ್ನೂ ಕೊಳ್ಳುವುದು
- ಅವರ ಗೆಳೆಯರೊಂದಿಗೆ ಸುತ್ತಮುತ್ತ ಆಡುವುದು
- ಪಕೋಡ ಮತ್ತು ಸಮೋಸಗಳನ್ನು ಮಾರುವುದು
93. ಗ್ರಾಮದಲ್ಲಿ ರೈತರಿಗೆ ಸಂತೆಯ ದಿನ ಏಕೆ ಉತ್ತಮ ದಿನವಾಗಿತ್ತು?
-
- ರೈತರು ಅವರ ಗೆಳೆಯರನ್ನು ಸಂತೆಯಲ್ಲಿ ಭೇಟಿಯಾಗುತ್ತಿದ್ದರು
- ರೈತರು ಬೆಳೆದ ವಸ್ತುಗಳನ್ನು ಮಾರಲು ಅದು ಉತ್ತಮ ಸ್ಥಳವಾಗಿತ್ತು
- ಸಂತೆಯಲ್ಲಿ ರೈತರಿಗೆ ಮೋಜು ಮಸ್ತಿ ದೊರೆಯುತ್ತಿತ್ತು
- ರೈತರಿಗೆ ಕುಳಿತು ಸಮೋಸ ತಿನ್ನಲು ಅವಕಾಶವಾಗುತಿತ್ತು
94. ರೈತರು ತಮ್ಮ ತರಕಾರಿ ಮತ್ತು ಧಾನ್ಯಗಳನ್ನು ಸಂತೆಗೆ ಹೇಗೆ ಒಯ್ಯುತ್ತಿದ್ದರು?
-
- ಅವರ ಟ್ರಕ್ ಮತ್ತು ಕಾರುಗಳಲ್ಲಿ
- ಅವರ ಎತ್ತಿನಗಾಡಿ ಮತ್ತು ಟ್ರ್ಯಾಕ್ಟರ್ ಗಳಲ್ಲಿ
- ರೈತರು ತಮ್ಮ ತಲೆಯ ಮೇಲೆ ಹೊತ್ತು
- ಸಹಾಯಕರು ಮತ್ತು ಗೆಳೆಯರಿಂದ ಹೊಯ್ಯುತ್ತಿದ್ದರು
95. ರೈತರು ಬೇರೆ ಏನನ್ನು ಸಂತೆಗೆ ಕೊಂಡೊಯ್ಯುತ್ತಿದ್ದರು
-
- ಅವರ ದನಕರುಗಳನ್ನು ಮತ್ತು ಕೋಳಿಗಳನ್ನು
- ಪೀಠೋಪಕರಣಗಳನ್ನು
- ಬಟ್ಟೆಗಳನ್ನು
- ಗೊಂಬೆಗಳನ್ನು
ಉತ್ತರ ಮತ್ತು ವಿವರಣೆ
91 – C
92 – A
93 – C
94 – B
95- A