ವಾಕ್ಯ ಸಮುದಾಯ 1
ಹಾಲು ಉತ್ತಮ ಆಹಾರ. ಇದು ನೀರು,ಸಕ್ಕರೆ,ಕೊಬ್ಬು, ವಿಟಮಿನ್ ಗಳು ಮತ್ತು ಪ್ರೋಟೀನ್ ಗಳನ್ನೂ ಹೊಂದಿದೆ. ಜನರು ವಿವಿಧ ಪ್ರಾಣಿಗಳಿಂದ ಪಡೆದ ಹಾಲನ್ನು ಕುಡಿಯುತ್ತಾರೆ. ಇಂಗ್ಲೆಂಡ್ ನಲ್ಲಿ ಮತ್ತು ಇತರೆ ಶೀತ ದೇಶಗಳಲ್ಲಿ ಹಸುಗಳಿವೆ. ಅರೇಬಿಯಾ ಮತ್ತು ಮಧ್ಯ ಏಷ್ಯಾ ದ ಒಣ ಶುಷ್ಕ ದೇಶಗಳಲ್ಲಿ/ಪ್ರದೇಶಗಳಲ್ಲಿ ಒಂಟೆಗಳಿವೆ. ಭಾರತದಲ್ಲಿ ಹಸುಗಳು ಮತ್ತು ಎಮ್ಮೆಗಳು ಇವೆ. ಬಹುತೇಕ ಸ್ಥಳಗಳಲ್ಲಿ ಮೇಕೆಗಳಿವೆ. ಜನರು ಹಸುಗಳು ಅಥವಾ ಇತರೆ ಪ್ರಾಣಿಗಳನ್ನು ಇಟ್ಟಿಕೊಂಡರೆ ಅವರು ಸಾಕಷ್ಟು ಹಾಲು ಪಡೆಯುತ್ತಾರೆ. ಹಾಲಿನಿಂದ ಅವರು ಬೆಣ್ಣೆ ಮತ್ತು ಗಿಣ್ಣು (cheese) ಮಾಡಬಹುದು. ನಾವು ಬಳಸುವ ಹಾಲು ಕ್ರಿಮಿಮುಕ್ತ ಮತ್ತು ಶುದ್ಧವಾಗಿರುವುದು ಅವಶ್ಯವಾಗಿದೆ. ಅಶುದ್ಧ ಹಾಲು ಮಾನವನ ದೇಹಕ್ಕೆ ಒಳ್ಳೆಯದನ್ನು ಮಾಡುವುದಕ್ಕಿಂತ ಹೆಚ್ಚು ಹಾನಿ ಉಂಟುಮಾಡುತ್ತದೆ.
61. ಜನರು …………..ಪ್ರಾಣಿಗಳಿಂದ ಪಡೆದ ಹಾಲನ್ನು ಕುಡಿಯುತ್ತಾರೆ.
- ಒಂದೇ ರೀತಿಯ
- ವಿವಿಧ
- ಸಮಾನ ರೀತಿಯ
- ಬೇರೆ ರೀತಿಯ
62. ……………ದೇಶಗಳಲ್ಲಿ / ಪ್ರದೇಶಗಳಲ್ಲಿ ಒಂಟೆಗಳಿವೆ.
- ಶೀತ
- ಹಿಮಗಟ್ಟಿದ
- ಒಣ
- ತಂಪಾದ
63. ಜನರು ಹಸುವಿನ ರೀತಿಯ ಪ್ರಾಣಿಗಳನ್ನು ಇಟ್ಟುಕೊಂಡರೆ, ಅವರು…………..ಹಾಲನ್ನು ಪಡೆಯುತ್ತಾರೆ.
- ಸ್ವಲ್ಪ
- ಕಡಿಮೆ
- ಚಿಕ್ಕ
- ಸಾಕಷ್ಟು
64. ನಾವು ಬಳಸುವ ಹಾಲು ಶುದ್ಧವಾಗಿರಬೇಕಾಗಿರುವುದು …………..
- ಅವಶ್ಯಕ
- ಅನವಶ್ಯಕ
- ಅನಪೇಕ್ಷಿತ
- ಅನಗತ್ಯ
65. ಹಾನಿ ಪದದ ಅರ್ಥ …………..ಪದಕ್ಕೆ ಸಮಾನವಾಗಿದೆ.
- ಲಾಭ
- ಮರುಹೊಂದಿಸು
- ನಷ್ಟ
- ಸ್ಥಿರ
ಉತ್ತರ ಮತ್ತು ವಿವರಣೆ
61 – B
62 – C
63 – D
64 – A
65 – C