ವಾಕ್ಯ ಸಮುದಾಯ 3
ದೀಪಕ್ ಉತ್ಸಾಹಿತನಾಗಿದ್ದಾನೆ. ಇವನು ಈತನ ಚಿಕ್ಕಪ್ಪ ಮತ್ತು ಚಿಕ್ಕಪ್ಪನ ಮಕ್ಕಳಾದ ಪ್ರೀತಾ ಮತ್ತು ರಿಯಾ ಜೊತೆಗೆ ಭಾನುವಾರ ಪಿಕ್ಣಿಕ್ ಗೆ ತೆರಳುತ್ತಿದ್ದಾನೆ. ಇವನು ತನ್ನ ಬ್ಯಾಗ್ ನಲ್ಲಿ ಈಜುವಿಕೆಯ ಸಾಧನಗಳ ಕಿಟ್, ತಿಂಡಿ ತಿನಿಸು ಮತ್ತು ಆಟದ ಸಾಮಾನುಗಳನ್ನು ತುಂಬಿಕೊಂಡಿದ್ದಾನೆ. ಅವರು ಬೆಳಗ್ಗೆ ಆರು ಗಂಟೆಗೆ ಪ್ರಯಾಣ ಪ್ರಾರಂಭಿಸಿದರು. ಇದು ತುಂಬಾ ಸುದೀರ್ಘ ಪಯಣವಾಗಿತ್ತು ಮತ್ತು ಅವರು ಪಿಕ್ನಿಕ್ ಸ್ಥಳವನ್ನು ಬೆಳಿಗ್ಗೆ 6:00 ಗೆ ತಲುಪಿದರು. ಅದು ಹಳ್ಳಿಯ ಫಾರಂಹೌಸ್ ಆಗಿತ್ತು. ಅವರು ಭತ್ತ ಬೆಳೆದ ಪ್ರದೇಶವನ್ನು ನೋಡಲು ಹಳ್ಳಿಯ ಸುತ್ತಲೂ ನಡೆದಾಡಿದರು ಮತ್ತು ಅಕ್ಕಿಯನ್ನು ಹೇಗೆ ಬೆಳೆಯಲಾಗುತ್ತದೆ ಎಂಬುದನ್ನು ಕಲಿತರು. ಅವರು ಮರಗಳನ್ನು ಹತ್ತಿ ಮಾವು ಮತ್ತು ಸೀಬೆಯ ಹಣ್ಣುಗಳನ್ನು ಕಿತ್ತರು. ಮಧ್ಯಾಹ್ನದಲ್ಲಿ ಅವರು ಮರದ ಕೆಳಗೆ ಕುಳಿತು ಊಟ ಮಾಡಿದರು. ಯಾವಾಗ ಚಿಕ್ಕಪ್ಪ ‘ಇದು ಮನೆಗೆ ಹಿಂದಿರುಗುವ ಸಮಯ’ ಎಂದು ಹೇಳಿದರೋ ಆಗ ಅವರು ಇನ್ನು ಬಹಳ ಒತ್ತು ಅಲ್ಲೇ ತಂಗಲು ಬಯಸಿದರು. ಏಕೆಂದರೆ ಅವರು ಹಳ್ಳಿಯನ್ನು ತುಂಬಾ ಇಷ್ಟ ಪಟ್ಟಿದ್ದರು.
71. ‘ಉತ್ಸಾಹ’ ಎಂದರೆ…………..
- ವಿಶ್ವಾಸ
- ಬಹಳ ಸಂತೋಷ
- ಮಗ್ನ
- ನಿರಾಸೆ
72. ದೀಪಕ್ ಮತ್ತು ಆತನ ಚಿಕ್ಕಪ್ಪನ ಮಕ್ಕಳು…………..
- ಹಳ್ಳಿಯಲ್ಲಿ ಬೇಜಾರಿನ ಭಾವ ತಳೆದರು
- ಪಿಕ್ನಿಕ್ ಅನ್ನು ಆನಂದಿಸಿದರು
- ಮನೆಗೆ ಹಿಂತಿರುಗಲು ಬಯಸಿದರು
- ಮರಗಳನ್ನು ಹತ್ತಲಿಲ್ಲ
73. ದೀಪಕ್ ತನ್ನ …………..ರ ಜೊತೆಗೆ ಪಿಕ್ನಿಕ್ ಗೆ ಹೊರಟನು.
- ಪೋಷಕರು
- ಚಿಕ್ಕಪ್ಪ ಮತ್ತು ಚಿಕ್ಕಪ್ಪನ ಮಕ್ಕಳು
- ಸ್ನೇಹಿತರು
- ಸಹೋದರಿ
74. ಪಿಕ್ನಿಕ್ ಸ್ಥಳವೂ ಒಂದು……………ಆಗಿತ್ತು.
- ಉದ್ಯಾನ
- ಸಮುದ್ರದ ದಡ
- ಹಳ್ಳಿ
- ಈಜುಕೊಳ
75. ಚಿಕ್ಕಪ್ಪನು ದೀಪಕ್ ನಿಗೆ ಹೇಗೆ …………..ಎಂಬುದನ್ನು ತೋರಿಸಿದನು.
- ನಾವು ತಿನ್ನುತ್ತೇವೆ
- ಈಜುತ್ತೇವೆ
- ವಾಹನ ಸವಾರಿ ಮಾಡುತ್ತೇವೆ
- ಅಕ್ಕಿ ಬೆಳೆಯಲ್ಪಡುತ್ತದೆ
ಉತ್ತರ ಮತ್ತು ವಿವರಣೆ
71 – B
72 – B
73 – B
74 – C
75 -D