ವಾಕ್ಯ ಸಮುದಾಯ 1
ತೂಕವನ್ನು ಕಡಿಮೆ ಮಾಡಿಕೊಳ್ಳಲು ಅಥವಾ ಆರೋಗ್ಯಕರ ತೂಕವನ್ನು ಕಾಯ್ದುಕೊಳ್ಳಲು ಕೇವಲ ಎರಡು ಸರಳ ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಅವರು ಕಡಿಮೆ ಕೊಬ್ಬಿನ ಅಂಶ ಹಾಗೂ ಸಕ್ಕರೆಯನ್ನುಳ್ಳ ಸಂತುಲಿತ ಆಹಾರವನ್ನು ಸೇವಿಸಬೇಕು ಮತ್ತು ಹೆಚ್ಚು ವ್ಯಾಯಾಮವನ್ನು ಮಾಡಬೇಕು. ನೀವು ತೂಕವನ್ನು ಕಡಿಮೆ ಮಾಡಿಕೊಳ್ಳಲು ಉಪವಾಸ ಮಾಡಬೇಕಾಗಿಲ್ಲ. ನೀವು ಸಕ್ಕರೆ ಕೇಕುಗಳು, ಬಿಸ್ಕತ್ತುಗಳನ್ನು ಕಡಿಮೆ ತಿಂದರೆ ಮತ್ತು ಸಾಕಷ್ಟು ನೀರನ್ನು ಕುಡಿದರೆ ನೀವು ತೂಕವನ್ನು ಕಡಿಮೆ ಮಾಡಿಕೊಳ್ಳುತ್ತೀರಿ ಮತ್ತು ಆರೋಗ್ಯಯುತವಾಗಿರುತ್ತೀರಿ. ಪ್ರತಿದಿನ ನಡೆದಾಡಿ ಅಥವಾ ಸೈಕಲ್ ತುಳಿಯಿರಿ.ವಿಡಿಯೋ ಆಟಗಳನ್ನು ಆಡುವುದಕ್ಕಿಂತ ಅಥವಾ ದೂರದರ್ಶನ ವೀಕ್ಷಿಸುವುದರ ಬದಲು ಸಕ್ರಿಯರಾಗಿರಿ.
61 .ನಾವು ಹೇಗೆ ಆರೋಗ್ಯಯುತವಾಗಿರಬಹುದು?
-
- ಬಿಸ್ಕತ್ತುಗಳನ್ನು ತಿನ್ನುವುದರಿಂದ ಮಾತ್ರ
- ಕೇವಲ ವ್ಯಾಯಾಮ ಮಾಡುವುದರಿಂದ
- ಸಂತುಲಿತ ಆಹಾರವನ್ನು ಸೇವಿಸುವುದರಿಂದ ಮತ್ತು ವ್ಯಾಯಾಮ ಮಾಡುವುದರಿಂದ
- ಹೆಚ್ಚು ಹಣ್ಣುಗಳನ್ನು ತಿನ್ನುವುದರಿಂದ
62 .ತೂಕವನ್ನು ಕಡಿಮೆ ಮಾಡಿಕೊಳ್ಳಲು ಏನನ್ನು ಹೆಚ್ಚಾಗಿ ತಿನ್ನಬೇಕು?
-
- ಸಕ್ಕರೆ ಮತ್ತು ಕೇಕುಗಳು
- ಹಣ್ಣುಗಳು ಮತ್ತು ತರಕಾರಿಗಳು
- ಬಿಸ್ಕತ್ತುಗಳು ಮತ್ತು ಸಕ್ಕರೆ
- ಬಿಸ್ಕತ್ತುಗಳು ಮತ್ತು ಹಣ್ಣುಗಳು
63 .ಆರೋಗ್ಯವಂತರಾಗಿರಲು ನಾವು ಯಾವುದನ್ನು ಸಾಕಷ್ಟು ಕುಡಿಯಬೇಕು?
-
- ಕೋಲಗಳು
- ಹಣ್ಣಿನರಸ
- ನೀರು
- ತರಕಾರಿಯ ರಸ
64 .ಎಲ್ಲರಿಗೂ ಉತ್ತಮ ವ್ಯಾಯಾಮ ಯಾವುದು?
-
- ನಡೆಯುವುದು ಮತ್ತು ಸೈಕಲ್ ತುಳಿಯುವುದು
- ಗಾಳಿಪಟ ಹಾರಾಟ
- ವಿಡಿಯೋ ಆಟಗಳನ್ನು ಆಡುವುದು
- ದೂರದರ್ಶನ ವೀಕ್ಷಿಸುವುದು
65 .’ಸಕ್ರಿಯ’ ಪದದ ವಿರುದ್ಧ ಅರ್ಥ ನೀಡುವ ಪದ ಯಾವುದು?
-
- ಮಂದ
- ನಿಷ್ಕ್ರೀಯ
- ಆಸಕ್ತಿಕರ
- ಶಕ್ತಿಯುತ
ಉತ್ತರ ಮತ್ತು ವಿವರಣೆ
61 – C
62 – B
63 – C
64 – A
65 – B