ವಾಕ್ಯ ಸಮುದಾಯ 4
ಸದೃಡವಾಗಿರಲು ಮತ್ತು ಆರೋಗ್ಯವಾಗಿರಲು ನೀವು ದೈಹಿಕವಾಗಿ ಸಕ್ರಿಯರಾಗಿ ಇರಬೇಕು. ನಿಯಮಿತ ದೈಹಿಕ ಚಟುವಟಿಕೆಗಳು ನಿಮ್ಮನ್ನು ಬೊಜ್ಜು, ಹೃದಯ ಸಂಬಂಧಿ ಕಾಯಿಲೆ, ಕ್ಯಾನ್ಸರ್, ಮಾನಸಿಕ ಅಸ್ವಸ್ಥತೆ, ಮಧುಮೇಹ ಮತ್ತು ಸಂಧಿವಾತದಂತಹ ಗಂಭೀರ ಕಾಯಿಲೆಗಳಿಂದ ರಕ್ಷಿಸುತ್ತದೆ. ಜಡ ಜೀವನ ಶೈಲಿಯೊಂದಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಅಪಾಯವನ್ನು ಕಡಿಮೆ ಮಾಡಲು ನಿಯಮಿತವಾಗಿ ಬೈಸಿಕಲ್ ಸವಾರಿ ಮಾಡುವುದು ಉತ್ತಮ ಮಾರ್ಗವಾಗಿದೆ. ಸೈಕ್ಲಿಂಗ್ ಒಂದು ಆರೋಗ್ಯಕರ ಮತ್ತು ಕಡಿಮೆ ಪರಿಣಾಮದ ವ್ಯಾಯಾಮವಾಗಿದ್ದು . ಇದನ್ನು ಎಲ್ಲಾ ವಯಸ್ಸಿನ ಜನರು, ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಆನಂದಿಸಬಹುದು. ಇದು ಅಗ್ಗವಾಗಿದ್ದು ಮನಸ್ಸಿಗೆ ಮುದ ನೀಡಿ ಪರಿಸರವನ್ನು ಹಾನಿ ಮಾಡುವುದಿಲ್ಲ. ದಿನನಿತ್ಯದ ವ್ಯಾಯಾಮವನ್ನು ದಿನಚರಿಯೊಂದಿಗೆ ಸಂಯೋಜಿಸಲು ಮತ್ತು ಸಮಯ ಪ್ರಜ್ಞೆ ಮೂಡಿಸಲು ಕೆಲಸಕ್ಕೆ ಅಥವಾ ಅಂಗಡಿಗೆ ಸೈಕಲ್ಲಿನಲ್ಲಿ ಸವಾರಿ ಮಾಡುವುದು. ಸಾರಿಗೆ, ಮನರಂಜನೆ ಮತ್ತು ಕ್ರೀಡೆಗಾಗಿ ಸುಮಾರು ಒಂದು ಶತಕೋಟಿ ಜನರು ಬೈಸಿಕಲ್ ಸವಾರಿ ಮಾಡುತ್ತಾರೆ. ತೂಕವನ್ನು ಕಡಿಮೆ ಮಾಡಲು ಸೈಕ್ಲಿಂಗ್ ಉತ್ತಮ ಮಾರ್ಗವಾಗಿದೆ. ಏಕೆಂದರೆ ಇದು ಸ್ನಾಯುಗಳನ್ನೂ ನಿರ್ಮಿಸುತ್ತದೆ ಮತ್ತು ದೇಹದ ಕೊಬ್ಬನ್ನು ಸುಡುತ್ತದೆ. ಪ್ರತಿದಿನ ಅರ್ಧಗಂಟೆಯವರೆಗೆ ಸೈಕ್ಲಿಂಗ್ ಮಾಡುವ ಮೂಲಕ ವರ್ಷದಲ್ಲಿ ಕನಿಷ್ಠ 5 ಕಿಲೋ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು ಎಂದು ಸಂಶೋಧನೆಗಳು ಸೂಚಿಸುತ್ತವೆ.
76. ಈ ವಾಕ್ಯ ಸಮುದಾಯದ ಮುಖ್ಯ ಉದ್ದೇಶ, ಇದರ ಅನುಕೂಲಗಳನ್ನು ನಮಗೆ ತಿಳಿಸುವುದು:
- ಸುಸ್ಥಿತಿಯಲ್ಲಿರುವುದು
- ಸೈಕಲ್ ಸವಾರಿ ಮಾಡುವುದು
- ವ್ಯಾಯಾಮ ಮಾಡುವುದು
- ತೂಕವನ್ನು ಕಡಿಮೆ ಮಾಡುವುದು
77. ಲೇಖಕ ಸೈಕಲ್ ಸವಾರಿ ಪರಿಸರವನ್ನು ಹಾಳುಮಾಡುವುದಿಲ್ಲ ಎಂದು ಹೇಳುವಾಗ ಈ ಕೆಳಗಿನ ಯಾವುದು ಇದಕ್ಕೆ ಸರಿಹೊಂದುವುದಿಲ್ಲ?
- ಇದು ಯಾವುದೇ ಅನಾರೋಗ್ಯಕರ ಅನಿಲವನ್ನು ಹೊರಸೂಸುವುದಿಲ್ಲ
- ಇದನ್ನು ಪೆಟ್ರೋಲ್ ಅಥವಾ ಡೀಸೆಲ್ ಇಲ್ಲದೆ ಚಲಾಯಿಸಬಹುದು
- ಇದು ಗಾಳಿಯನ್ನು ಕಲುಷಿತಗೊಳಿಸುವುದಿಲ್ಲ
- ಇದನ್ನು ಎಲ್ಲಾ ವಯಸ್ಸಿನವರು ಓಡಿಸಬಹುದು
78. ‘ಜಡ’ ಪದದ ವಿರುದ್ಧಾರ್ಥಕ ಪದ
-
- ಸಕ್ರಿಯ
- ಸೋಂಬೇರಿತನ
- ನಿಷ್ಕ್ರೀಯ
- ಕುರ್ಚಿಗೆ ಅಂಟಿಕೊಂಡು ಕೂರುವುದು
79. ಕಡಿಮೆ ಪರಿಣಾಮದ ವ್ಯಾಯಾಮ ಎಂದರೆ ಯಾವುದು?
-
- ಆಯಾಸಗೊಳಿಸುವುದಿಲ್ಲ
- ದುಬಾರಿಯಲ್ಲ
- ಸಮರ್ಥವಾಗಿಲ್ಲ
- ನೀರಸವಲ್ಲ
80.’ನಿಯಮಿತ ರೂಪದಲ್ಲಿ ಸೈಕ್ಲಿಂಗ್ ಮಾಡುವುದರಿಂದ ಈ ಕೆಳಗಿನ ಒಂದನ್ನು ಹೊರತುಪಡಿಸಿ ನಮಗೆ ಸಹಾಯ ಮಾಡುತ್ತದೆ:
-
- ಕೊಬ್ಬನ್ನು ಕಡಿಮೆ ಮಾಡಿ ಸ್ನಾಯುಗಳನ್ನು ಬಲಪಡಿಸಲು
- ಕೆಲಸದೊಂದಿಗೆ ವಿನೋದವನ್ನು ಸಂಯೋಜಿಸಲು
- ಗಂಭೀರ ಅಪಘಾತಗಳನ್ನು ತಡೆಗಟ್ಟಲು
- ಆರೋಗ್ಯವಾಗಿರಲು
ಉತ್ತರ ಮತ್ತು ವಿವರಣೆ
76 – C
77 – D
78 – A
79 – A
80 – B