ವಾಕ್ಯ ಸಮುದಾಯ 1
ಒಂದು ಸಾವಿರ ವರ್ಷಗಳ ಹಿಂದೆ ಚೂಯಿಂಗ್ ಗಮ್ ಮೆಕ್ಸಿಕನ್ ಕಾಡುಗಳಲ್ಲಿ ಮಾಯನ್ ರಿಂದ ಕಂಡುಹಿಡಿಯಲ್ಪಟ್ಟಿತು. ಅವರು ಸಪೋಡಿಲ್ಲ ಮರದಿಂದ ದ್ರವ ಸೋರುವುದನ್ನು ಕಂಡರು. ಅದು ಹೊರಹಾಕಲ್ಪಟ್ಟಂತೆ ಏನೋ ಒಂದು ರೀತಿ ಗಟ್ಟಿಯಾಗುತ್ತಿತ್ತು. ಅದನ್ನು ಅವರು ಚಿಕಲ್ (ಸಪೋಡಿಲ್ಲ ಮರದಿಂದ ಸೋರುವ ಹಾಲು) ಎಂದು ಕರೆದರು. ಅದನ್ನು ಅಗಿಯಬಹುದಾಗಿತ್ತು ಮತ್ತು ರುಚಿಕರವಾಗಿತ್ತು .ಇಂದಿಗೂ ಚಿಕ್ಲೆರೋಸ್ ಕರೆಯಲ್ಪಡುವ ಕೆಲಸಗಾರರು ಚಿಕಲ್ ನ್ನು ಸಂಗ್ರಹಿಸುತ್ತಾರೆ. ಚಿಕಲ್ ನ್ನು ಬೇಯಿಸಿ ನೀರನ್ನು ಹೊರತೆಗೆಯಲಾಗುತ್ತದೆ ನಂತರ ಸುಮಾರು 30 ಪೌಂಡ್ ಅಥವಾ 14 ಕಿಲೋಗ್ರಾಂನಂತೆ ಪ್ರತಿಯೊಂದನ್ನು ಹಲಗೆಗಳಾಗಿ ತಯಾರು ಮಾಡಲಾಗುತ್ತದೆ. ಫ್ಯಾಕ್ಟರಿಗಳಿಗೆ ಈ ಹಲಗೆಗಳನ್ನು ಕಳುಹಿಸಲಾಗುತ್ತದೆ ಅಲ್ಲಿ ಇವತ್ತು ಸಿಹಿ ಸೇರಿಸಿ ಮೃದುಗೊಳಿಸಿ ಮತ್ತು ಬಣ್ಣವನ್ನು ಸೇರಿಸಲು ಹಲವು ಪದಾರ್ಥಗಳೊಂದಿಗೆ ಮಿಶ್ರಣ ಮಾಡಲಾಗುತ್ತದೆ.
61 ._______ಚೂಯಿಂಗ್ ಗಮ್ ಅನ್ನು ಕಂಡುಹಿಡಿದರು
- ಮಾಯನ್ನರು
- ಸಪೋಡಿಲ್ಲಸ್
- ಚಿಕ್ಲೆರೋಸ್
- ಗಮ್ ಫ್ಯಾಕ್ಟರಿಗಳು
62 ._______ಚಿಕಲ್ ನ್ನು ಸಂಗ್ರಹಿಸುವ ಕೆಲಸಗಾರರು
- ಸಪೋಡಿಲ್ಲಸ್
- ಮಾಯನ್ಸ್
- ಚಿಕ್ಲೆರೋಸ್
- ಗಮ್ಮರ್ಸ್
63 . ಚಿಕಲ್ ನ ಹಲಗೆಗಳನ್ನು ಇಲ್ಲಿಗೆ ಕಳುಹಿಸಲಾಗುತ್ತದೆ
- ಮರುಬಳಕೆ ಕೇಂದ್ರಗಳು
- ಗನ್ ಫ್ಯಾಕ್ಟರಿಗಳು
- ಮೆಕ್ಸಿಕನ್ ಕಾಡುಗಳು
- ಮಿಠಾಯಿ ಅಂಗಡಿಗಳು
64 .ಕೆಳಗಿನವುಗಳಲ್ಲಿ ಒಂದನ್ನು ಹೊರತುಪಡಿಸಿ ಉಳಿದವುಗಳನ್ನು ಮಾಡಲು ಚಿಕಲ್ ಗೆ ಹಲವು ಪದಾರ್ಥಗಳನ್ನು ಸೇರಿಸಲಾಗುತ್ತದೆ
- ಮೃದು
- ಪರಿಮಳ
- ಗಟ್ಟಿ
- ಸಿಹಿ
65 . ಈ ವಾಕ್ಯ ಸಮುದಾಯಕ್ಕೆ ಒಂದು ಉತ್ತಮ ಶೀರ್ಷಿಕೆ ಇದು:
- ಗಮ್
- ಚಿಕ್ಲೆರೋ
- ಚಿಕ್ಲೆರೋ ಕಥೆ
- ಚೂಯಿಂಗ್ ಗಮ್ ಕಥೆ
ಉತ್ತರ ಮತ್ತು ವಿವರಣೆ
61 – A
62 – C
63 – B
64 – C
65 – D