ಕೊಟ್ಟಿರುವ ಜೀವನ ಚರಿತ್ರೆಯನ್ನು ಓದಿ ಅರ್ಥೈಸಿಕೊಂಡು, ಪ್ರಶ್ನೆ ಸಂಖ್ಯೆ 1 ರಿಂದ 3 ರವರೆಗೆ ಉತ್ತರಿಸಿ:
‘ಅಂಬಿಕಾತನಯದತ್ತ’ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದ ಶ್ರೀ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರು ಕ್ರಿ. ಶ.1896 ರಲ್ಲಿ ಧಾರವಾಡದ ಸಾಧನಕೇರಿಯಲ್ಲಿ ಜನಿಸಿದರು. ಇವರು ಪ್ರೌಢಶಾಲ ಅಧ್ಯಾಪಕರಾಗಿ, ಸೊಲ್ಲಾಪುರದ ರಾಜಾರಾಮ್ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ, ಧಾರಾವಾರ್ಧದ ಬಾನುಲಿ ಕೇಂದ್ರದ ಸಲಹೆಗಾರರಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ಕನ್ನಡ ನವೋದಯ ಸಾಹಿತ್ಯದ ಪ್ರಮುಖ ಕವಿಗಳಲ್ಲಿ ಒಬ್ಬರಾದ ಇವರು ಗರಿ, ನಾಕುತಂತಿ, ನಾದಲೀಲೆ, ಮೇಘದೂತ, ಗಂಗಾವತರಣ, ಸಖೀಗೀತ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ.ಇವರ ನಾಕುತಂತಿ ಕವನ ಸಂಕಲನಕ್ಕೆ ಭಾರತೀಯ ಜ್ಞಾನಪೀಠ ಪ್ರಶಸ್ತಿಯು ಲಭಿಸಿದೆ. ಭಾರತ ಸರ್ಕಾರದ ಪದ್ಮಶ್ರೀ, ಕೇಂದ್ರ ಮತ್ತು ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೂ ಭಾಜನರಾಗಿದ್ದಾರೆ.
1. ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರ ಕಾವ್ಯನಾಮ:
-
- ಕುವೆಂಪು
- ಅಂಬಿಗರ ಚೌಡಯ್ಯ
- ದ.ರಾ.ಬೇಂದ್ರೆ
- ಅಂಬಿಕಾತನದತ್ತ
2. ದ.ರಾ.ಬೇಂದ್ರೆಯವರು ಬಾನುಲಿ ಕೇಂದ್ರದ ಸಲಹೆಗಾರರಾಗಿ ಸೇವೆ ಸಲ್ಲಿಸಿದ ಸ್ಥಳ:
-
- ಬೆಂಗಳೂರು
- ಮೈಸೂರು
- ಧಾರವಾಡ
- ಕಲಬುರ್ಗಿ
3. ದ.ರಾ.ಬೇಂದ್ರೆಯವರಿಗೆ ಜ್ಞಾನಪೀಠ ಪ್ರಶಸ್ತಿಯನ್ನು ತಂದು ಕೊಟ್ಟ ಕೃತಿ:
-
- ಗಂಗಾವತರಣ
- ಸಖೀಗೀತ
- ನಾಕುತಂತಿ
- ನಾದಲೀಲೆ
ಉತ್ತರ ಮತ್ತು ವಿವರಣೆ
1 – Option : D
ಅಂಬಿಕಾತನದತ್ತ
2- Option : C
ಧಾರವಾಡ
3- Option : C
ನಾಕುತಂತಿ