ನೀಡಿರುವ ಗದ್ಯಭಾಗವನ್ನು ಓದಿ, ಅರ್ಥೈಸಿಕೊಂಡು ಪ್ರಶ್ನೆ ಸಂಖ್ಯೆ 1 ರಿಂದ 3 ರವರೆಗೆ ಉತ್ತರಿಸಿ:
ಕವಿ ಸಿದ್ದಯ್ಯ ಪುರಾಣಿಕ ಅವರು 1918 ರಲ್ಲಿ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ದ್ಯಾಮಪುರದಲ್ಲಿ ಜನಿಸಿದರು. ಇವರು ‘ಕಾವ್ಯಾನಂದ’ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದರು. ಐ.ಎ.ಎಸ್. ಅಧಿಕಾರಿಯಾಗಿ ಕರ್ನಾಟಕದಾದ್ಯಂತ ಕೆಲಸ ಮಾಡಿದ್ದಾರೆ. ಇವರು ಕಾವ್ಯ, ನಾಟಕ, ಪ್ರಬಂಧ, ಜೀವನಚರಿತ್ರೆ ಮತ್ತು ವಚನಗಳನ್ನು ರಚಿಸಿದ್ದಾರೆ.
ಇವರ ‘ಶರಣ ಚರಿತಾಮೃತ’ ಕೃತಿಯು ಹೊಸಗನ್ನಡ ಗದ್ಯ ಸಾಹಿತ್ಯಕ್ಕೆ ದೊಡ್ಡ ಕೊಡುಗೆ. ‘ಜಲಪಾತ’, ‘ಕರುಣಾಶ್ರಾವಣ’, ‘ಮಾನಸ ಸರೋವರ’, ‘ಮೊದಲು ಮಾನವನಾಗು’, ವಚನೋದ್ಯಾನ’ ಮುಂತಾದವು ಇವರ ಕವನ ಸಂಕಲನಗಳು. ಇವರಿಗೆ ‘ಬಿಲ್ವಾರ’ ಪ್ರಶಸ್ತಿ ಮತ್ತು ‘ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ’ ಪ್ರಶಸ್ತಿ ಗಳು ಲಭಿಸಿವೆ. ಇವರು 1994 ರಲ್ಲಿ ಮರಣ ಹೊಂದಿದರು.
- ಸಿದ್ದಯ್ಯ ಪುರಾಣಿಕ ಅವರ ಜನ್ಮಸ್ಥಳ
- ಕೊಪ್ಪಳ
- ಯಲಬುರ್ಗಾ
- ದ್ಯಾಮಪುರ
- ಬೆಂಗಳೂರು
- ಕಾವ್ಯಾನಂದ ಎಂಬುದು ಸಿದ್ದಯ್ಯ ಪುರಾಣಿಕರ:
- ಕಾವ್ಯನಾಮ
- ರೂಢನಾಮ
- ಅನ್ವರ್ಥನಾಮ
- ಅಂಕಿತನಾಮ
- ಸಿದ್ದಯ್ಯ ಪುರಾಣಿಕರು ಹೊಸಗನ್ನಡ ಗದ್ಯ ಸಾಹಿತ್ಯಕ್ಕೆ ದೊಡ್ಡ ಕೊಡುಗೆಯಾಗಿ ನೀಡಿದ ಕೃತಿ:
- ಜಲಪಾತ
- ಮಾನಸ ಸರೋವರ
- ಕರುಣಾಶ್ರಾವಣ
- ಶರಣ ಚರಿತಾಮೃತ
ಉತ್ತರ ಮತ್ತು ವಿವರಣೆ
1. C
2. A
3. D