ವಾಕ್ಯ ಸಮುದಾಯ 3
ಹಾವುಗಳು ಪ್ರಾಣಿಗಳ ಸರೀಸೃಪಗಳ ವರ್ಗಕ್ಕೆ ಸೇರಿವೆ. ಈ ಗುಂಪು ಮೊಸಳೆಗಳು, ಹಲ್ಲಿಗಳು, ಆಮೆಗಳನ್ನು ಒಳಗೊಂಡಿದೆ. ಹಾವುಗಳು ಕಾಡುಗಳಲ್ಲಿ, ಮರುಭೂಮಿಗಳಲ್ಲಿ ಮತ್ತು ಕೆರೆಗಳಲ್ಲಿ ಬಹುತೇಕ ಎಲ್ಲಾ ಕಡೆಯೂ ಕಂಡುಬರುತ್ತದೆ. ಹಿಮದಿಂದ ಕೂಡಿದ ನೆಲವಿರುವ ಸ್ಥಳಗಳಲ್ಲಿ ಅವು ಬದುಕುಳಿಯುವುದಿಲ್ಲ. ಇದು ತೊಂದರೆಗಳಿಂದ ತಪ್ಪಿಸಿಕೊಳ್ಳಲು ಮತ್ತು ಆಹಾರವನ್ನು ಹುಡುಕಲು ತನ್ನ ಇತರೆ ಇಂದ್ರಿಯಗಳನ್ನು ಬಳಸುತ್ತದೆ. ಕೆಲವು ಹಾವುಗಳು ತಮ್ಮ ಮೂಗಿನ ಮೂಲಕ ವಾಸನೆಯನ್ನು ಗ್ರಹಿಸುತ್ತವೆ. ಆದರೆ ಬಹುತೇಕ ಹಾವುಗಳು ತಮ್ಮ ನಾಲಿಗೆಯ ಮೂಲಕ ವಾಸನೆ ಗ್ರಹಿಸುತ್ತವೆ. ಹಾವಿನ ದೇಹವು ಕೋಶದ ಪದರಗಳಿಂದ ರಚಿತವಾದ ಹುರುಪೆಯನ್ನು ಹೊಂದಿರುತ್ತದೆ. ಪ್ರತಿ ವರ್ಷಕ್ಕೆ ಕೆಲವು ಬಾರಿ ಹಾವು ತನ್ನ ಚರ್ಮದ ಹೊರಭಾಗದ ಮೃತ ಚರ್ಮವನ್ನು ಹೊರಹಾಕುತ್ತದೆ. ಕೆಳಗಿನ ಕೋಶಗಳು ಏಕಕಾಲದಲ್ಲಿ ಹಾವಿನ ರಕ್ಷಣಾತ್ಮಕ ಹೊದಿಕೆಯ ಹೊರ ಪದರವನ್ನು ರೂಪಿಸುತ್ತದೆ.
- ಹಾವುಗಳನ್ನು ………….. ಎನ್ನುತ್ತಾರೆ.
- ಹಲ್ಲಿಗಳು
- ಹುರುಪೆಗಳು
- ಸರಿಸೃಪಗಳು
- ಆಮೆಗಳು
- ಹಾವುಗಳು ಎಲ್ಲಿ ಬದುಕುಳಿಯುವುದಿಲ್ಲ
- ಹಿಮದಿಂದ ಕೂಡಿದ ಸ್ಥಳಗಳು
- ಮರುಭೂಮಿ
- ಅರಣ್ಯಗಳು
- ಕೆರೆಗಳು
- ಹಾವುಗಳು ಮಂದ ……………ಹೊಂದಿವೆ.
- ವಾಸನೆ ಗ್ರಹಿಸುವಿಕೆ
- ಕೇಳಿಸಿಕೊಳ್ಳುವಿಕೆ
- ಸ್ಪರ್ಶ ಇಂದ್ರಿಯ
- ದೃಷ್ಟಿ
- ಹಾವನ್ನು ಗಾಯಗಳಿಂದ …………… ರಕ್ಷಿಸುತ್ತದೆ.
- ನಾಲಿಗೆ
- ಹುರುಪೆ
- ಮೃತ ಚರ್ಮ
- ಮೂಗು
- ಬದುಕು ಪದದ ಅರ್ಥ
- ಜೀವಿಸು
- ಚಲನೆ
- ತಪ್ಪಿಸಿಕೊಳ್ಳು
- ಸಂಬಂಧಿತ
ಉತ್ತರ ಮತ್ತು ವಿವರಣೆ
71 – C
72 – A
73 – D
74 – B
75 – A